ಮಾ ವೈಷ್ಣೋದೇವಿಯ ದರ್ಶನಕ್ಕೆ 2200 ಕಿ.ಮೀ. ದೂರ ಕ್ರಮಿಸಲು ಸೈಕಲ್ ಏರಿದ ಅಜ್ಜಿ

ಮಾತಾ ವೈಷ್ಣೋ ದೇವಿಯ ಪವಿತ್ರ ಧಾಮ್ ತ್ರಿಕುಟಾ ಪರ್ವತದಲ್ಲಿ ದೇಶದ ಮೂಲೆ ಮೂಲೆಯಿಂದ ಮಾತಾ ವೈಷ್ಣೋದೇವಿ ದರ್ಶನಕ್ಕೆ ಜನ ಸಾಗರ ಹರಿದು ಬರುತ್ತದೆ .ಈ ರೀತಿ  ಬರುವ ಪ್ರಯಾಣಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ . ಆದಾಗ್ಯೂ ಕೆಲ ಭಕ್ತರು ಈ ಎಲ್ಲಾ ಅದೇ ತಡೆಗಳನ್ನು ಲೆಕ್ಕಿಸದೆ ಮಾ ವೈಷ್ಣೋದೇವಿಯ  ದರ್ಶನವನ್ನು ಪಡೆಯುತ್ತಾರೆ .ಈ ಪೈಕಿ ಮಹಾರಾಷ್ಟ್ರದ ಖಮ್‌ಗಾಂವ್‌ನಿಂದ ಮಾ ವೈಷ್ಣೋದೇವಿಯ ಪಣ ತೊಟ್ಟ  68 ವರ್ಷ ವಯಸ್ಸಿನ ಅಜ್ಜಿ  ಜಮ್ಮುವಿನ ಕತ್ರಾಗೆ ತೆರಳಲು ಸೈಕಲ್ ಏರಿದ್ದಾರೆ .ಸುಮಾರು 2200 ಕಿ.ಮೀ. ದೂರ  ಕ್ರಮಿಸಿ ಮಾತಾ ವೈಷ್ಣೋ ದೇವಿಯ ದರ್ಶನ ಪಡೆದೇ ಪಡೆಯುತ್ತೇನೆ ಎನ್ನುತ್ತಿದ್ದಾರೆ ,ಈ ಅಜ್ಜಿ ,ಅಜ್ಜಿಯ ಈ ಹುಮ್ಮಸ್ಸು ಮತ್ತು ಆತ್ಮ ವಿಶ್ವಾಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.ವಿಡಿಯೋ ನೋಡಿ 



Comments